ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. == ಕಥೆ == ಕೊಲ್ಕತ್ತದಿಂದ ಬೆಂಗಳೂರಿಗೆ ಬರುತ್ತಿದ್ದ ಗಗನ್ ದೀಕ್ಷಿತ ದಾಳಿಯಿಂದ ಘನಶ್ಯಾಮ ಯಾದವ ನನ್ನು ರಕ್ಷಿಸುತ್ತಾನೆ. ಅದು ಯಾದವ್ ಮತಕ್ಕಾಗಿ ಮಾಡಿಸಿದ ನಕಲಿ ದಾಳಿ ತಿಳಿದು ತನ್ನ ಪತ್ರಿಕಾ ಸಂಪಾದಕ ಅವಿನಾಶ ಸುದ್ದಿ ಪ್ರಕಟಿಸುತ್ತಾನೆ. ತಾನು ನಕಲಿ ದಾಳಿ ಮಾಡಿಸಿದ ಸುದ್ದಿ ಕಂಡು ಯಾದವ ಕೋಪಗೊಳ್ಳುತ್ತನೆ. ಗಗನ್ ತನ್ನ ಸ್ನೇಹಿತ ಕೇಶವ ನನ್ನು ಭೇಟಿಯಾಗಿ ಯಾರೊ ಒಬ್ಬರ ಫೋನಿಗೆ ಕರೆ ಮಾಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವನು. == ಪಾತ್ರವರ್ಗ == ಪುನೀತ್ ರಾಜಕುಮಾರ್ : ಗಗನ್ ದೀಕ್ಷಿತ್ 'ದಿ ನ್ಯೂಸ್ ಆಫ್ ಇಂಡಿಯಾ' ಪತ್ರಿಕೆಯ ಪತ್ರಕರ್ತ. ಅನುಪಮಾ ಪರಮೇಶ್ವರನ್ : ಶ್ರುತಿ, ವಕೀಲೆ. ರಚಿತಾ ರಾಮ್ : ಸಾಕ್ಷಿ, ಮೊಬೈಲ್ ನೆಟ್ವರ್ಕ್ ಆಫೀಸ್ ಮ್ಯಾನೇಜರ್ ಚಿಕ್ಕಣ್ಣ ಸಾಧು ಕೊಕಿಲ ಪಿ.ರವಿಶಂಕರ್ ಅಚ್ಯುತ್ ಕುಮಾರ್ ಬಿ.ಸರೋಜಾ ದೇವಿ ಶ್ರೀನಿವಾಸಮೂರ್ತಿ ಅವಿನಾಶ್ ನಿಶಾಂತ್ ಎಲ್ ಎಸ್ (ಕಿರು ಪಾತ್ರ) ಜಾನಿ ಮಾಸ್ಟರ್ (ಕಿರು ಪಾತ್ರ) ರಾಕ್ಲೈನ್ ವೆಂಕಟೇಶ್ (ಕಿರು ಪಾತ್ರ === ಹಾಡುಗಳು === == ಬಿಡುಗಡೆ == ಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. == ಉಲ್ಲೇಖಗಳು ==